‘ಸಂತೋಷಕ್ಕೆ’ ಸೆನ್ಸಾರ್ ಹಂತಕ್ಕೆ
Posted date: 11 Mon, Aug 2014 – 09:52:13 AM

ಸರವನದಾಸ್ ನಿರ್ಮಾಣದ ಹಾಗೂ ನಿರ್ದೇಶನದ ‘ಸಂತೋಷಕ್ಕೆ’ ಕನ್ನಡ ಸಿನೆಮಾ ಈಗ ಸೆನ್ಸಾರ್ ಬಳಿ ಹೋಗಲು ಸಿದ್ದತೆ ಮಾಡಿಕೊಂಡಿದೆ. ಮೊದಲ ಸಿನೆಮಾಕ್ಕೆ ಸರವನದಾಸ್ ಅವರು ಕಥೆ, ಚಿತ್ರಕಥೆ ಸಹ ಬರೆದಿರುವರು.

ಒಬ್ಬ ನಾಯಕ ಹಾಗೂ ಆರು ನಾಯಕಿಯರ – ಗಂಡೊಂದು ಹೆಣ್ಣಾರು ಈ ಸಿನೆಮಾದಲ್ಲಿ ಮೈಸೂರಿನ ಅಪ್ಪೊಲ್ಲೊ ಆಸ್ಪತ್ರೆಯ ಲ್ಯಾಬ್ ಉದ್ಯೋಗಿ ಜೀವ ನಾಯಕರು. ಸೌಜನ್ಯ, ವರ್ಷ, ಬಿಂದು, ಕಾವ್ಯ, ಸುಕನ್ಯ, ಪೂಜಾ  ಈ ಚಿತ್ರದ ನಾಯಕಿಯರು. ವಿಜಯಗೋಪಾಲ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.

ವಿಶೇಷ ಕಥೆಯನ್ನು ಒಳಗೊಂಡ ಈ ‘ಸಂತೋಷಕ್ಕೆ’ ಮಾನವೀಯತೆ ಮುಖ್ಯ ಎಂದು ಸಾರುತ್ತದೆ. ಈ ಮಾನವೀಯತೆ ವಿಚಾರವನ್ನು ಇಂದಿನ ಫೇಸ್ ಬುಕ್, ವ್ಹಾಟ್ಸ್ ಅಪ್ ಜನಾಂಗಕ್ಕೂ ಅನುಗುಣವಾಗುವ ಹಾಗೆ ನಿರ್ದೇಶಕರು ಚಿತ್ರೀಕರಿಸಿದ್ದಾರೆ.
‘ಸಂತೋಷಕ್ಕೆ’ ಸಿನೆಮಕ್ಕೆ 25 ದಿವಸಗಳ ಕಾಲ ಮೈಸೂರು, ಮೇಲುಕೋಟೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.  ರಂಗಸ್ವಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಿದ್ದಾರೆ.

ವಿನ್ ವೀರ ಅವರ ಸಾಹಸ, ಕಂಬಿ ರಾಜು ಅವರ ನೃತ್ಯ ನಿರ್ದೇಶನ, ಸೆಟ್ ಸೀನ ಅವರ ಕಲೆ, ವಿಜಯ್ ಅವರ ಸಂಕಲನ ಈ ಓಂ ಶರವಣಭವ ಪ್ರೊಡಕ್ಷನ್ ಚಿತ್ರ ‘ಸಂತೋಷಕ್ಕೆ’ ಒಳಗೊಂಡಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed